ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯು ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ದೇಶದಲ್ಲೇ ಈ ವ್ಯವಸ್ಥೆಯನ್ನು ಬಳಕೆಗೆ ತರುತ್ತಿರುವ ಪ್ರಥಮ ರಾಜ್ಯ ಕರ್ನಾಟಕವಾಗಿದೆ. ಯು.ಯು.ಸಿ.ಎಂ.ಎಸ್ ಎಲ್ಲಾ ವಿಶ್ವವಿದ್ಯಾಲಯಗಳನ್ನು ಮತ್ತು ಕಾಲೇಜುಗಳನ್ನು ಕ್ರೂಢಿಕರಿಸಿ ಹಾಗೂ ಏಕೀಕರಿಸಿ, ಎಲ್ಲರಿಗೂ ಒಂದೇ ವ್ಯವಸ್ಥೆಯಡಿ ವಿವಿಧ ಮಾಹಿತಿ ಒದಗಿಸುತ್ತದೆ. ಉನ್ನತ ಶಿಕ್ಷಣ ಇಲಾಖೆಯ ರಾಜ್ಯ ಯೋಜನೆ ನಿರ್ವಹಣಾ ಘಟಕವು UUCMS ಅಭಿವೃದ್ಧಿ ಮತ್ತು ಯೋಜನೆಯ ವಿವಿಧ ಹಂತಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ.
https://uucms.karnataka.gov.in/Login/index